ತಿಳಿಗನ್ನಡ ಭಗವದ್ಗೀತೆ - ಜುಲೈ 18, 2024

ಸಾಂಖ್ಯಯೋಗ, ಅಧ್ಯಾಯ ೨


ಶ್ಲೋಕ ೨೨(೩)(ಮುಂದುವರೆದ ಭಾಗ)


ಪೂರ್ವ ವಸ್ತುಗಳನ್ನು ತ್ಯಜಿಸಿ ಹೊಸ ವಸ್ತುಗಳನ್ನು ತೊಡಲಿವೆ, ಅಂತೆಯೆ


ಜೀವಾತ್ಮನು ತನ್ನ ಪೂರ್ವ ಶರೀರವನ್ನು ತ್ಯಜಿಸಿ ಹೊಸ ಶರೀರವನ್ನು ಪಡೆಯುತ್ತದೆ.


ಇದು ಧರ್ಮ ಯುದ್ಧ. ಯುದ್ಧ ಸಮಯದಲ್ಲಿ ಆಗುವ


ನಷ್ಟಗಳನ್ನು ಲೆಕ್ಕಿಸದೇ ಯುದ್ಧವನ್ನು ಮಾಡು. ವೃದ್ಧಾಪ್ಯದಲ್ಲಿರುವ ದ್ರೋಣ,


ಪಿತಾಮಹ ಭೀಷ್ಮ, ಕೃಪ ಇರುತ್ತಾರೆ, ದಾಯವಾದಿ ಕೌರವ ಪಡೆ ಇರುತ್ತದೆ,


ಬಂಧುಬಾಂಧವರು, ಸ್ನೇಹಿತರು ತರುಣರು ಇರಬಹುದು. ಅವರೆಲ್ಲರೂ ತ್ಯಾಗದ


ಮೂಲಕ ಯುದ್ಧದಲ್ಲಿ ಮಡಿದರೆ ತಮ್ಮ ಶರೀರವನ್ನು ತ್ಯಜಿಸಿ ಹೊಸ ಶರೀರವನ್ನು


ಪಡೆಯುತ್ತಾರೆ. ತ್ಯಾಗ ಎಂದರೆ ಯುದ್ಧದಲ್ಲಿ ಕರ್ತವ್ಯದೃಷ್ಟಿಯಿಂದ


ವೀರಾವೇಶದಿಂದ ಕಾದಾಡಿದರಿಂದ ಅವರಿಗೆ ಸ್ವರ್ಗಸುಖ ಸಿಗುತ್ತದೆ,


ಇಲ್ಲವೇ ಅವರು ಪುರಸ್ಕಾರಭಾಜನರಾಗುತ್ತಾರೆ ಎಂಬ ಸಂದೇಶ ಇಲ್ಲಿದೆ. ಹಳೇ


ಉಡುಪನ್ನು ಕಳಚಿ ಹೊಸ ಬಟ್ಟೆಯನ್ನು ತೊಟ್ಟಾಗ ಆಗುವ ಆನಂದದಂತೆ


ಅವರೆಲ್ಲರೂ ಹಳೇ ಶರೀರವನ್ನು ತ್ಯಜಿಸಿ ಹೊಸ ಶರೀರವನ್ನು ಪಡೆಯುವುದರಿಂದ


ಆನಂದ ಎನ್ನುವ ಮೋಕ್ಷವನ್ನು ಪಡೆಯುತ್ತಾರೆ.


ಟಿಪ್ಪಣಿ: ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ, ಹುಟ್ಟಿದವರು ಒಮ್ಮೆ ಸಾಯಲೇಬೇಕು, ಸಮುದ್ರದ


ಅಲೆಗಳಿಂದ ಜನಿತ ನೀರಿನ ಗುಳ್ಳೆಗಳು ಕ್ಷಣ ಮಾತ್ರದಲ್ಲಿ ಸಾಯುತ್ತವೆ. ಮತ್ತೊಮ್ಮೆ ಅಲೆಗಳು


ಬಂದಾಗ ಅದಕ್ಕೆ ಜೀವ ಬರುವುದು. ಮನುಷ್ಯನ ಬದುಕಿನಲ್ಲೂ ಈ ಕ್ರಮ ನಿರಂತರ. ಯಾರೂ


ಗೂಟಕ್ಕೆ ಕಟ್ಟಿಕೊಂಡು ಗಟ್ಟಿಯಾಗಿ ಕೂರುವುದಿಲ್ಲ. ಇದೇ ಶಾಶ್ವತ ತತ್ವ. ಹಾಗಿದ್ದ ಮೇಲೆ ಸಾಯಲು


ಅಂಜಿಕೆಯೇಕೆ. ಯಥಾರ್ಥವನ್ನು ತಿಳಿದು ಬದುಕು ಮಾಡುವುದನ್ನು ಕಲಿತರೆ ಅದೇ ಸ್ವರ್ಗ, ಅದೇ


ಮೋಕ್ಷ. ಇದರೊಂದಿಗೇ ನಂಬಿಕೆಯ ವೈಜ್ಞಾನಿಕ ಹಿನ್ನೆಲೆಯನ್ನೂ ಅರಿಯುವ ಪ್ರಯತ್ನ ಮಾಡಬೇಕು.


(ಮುಂದುವರೆಯುವುದು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

BHAGAVADGITE TILIGANNADA