ಪೋಸ್ಟ್‌ಗಳು

BHAGAVADGITE TILIGANNADA

ತಿಳಿಗನ್ನಡದಲ್ಲಿ ಭಗವದ್ಗೀತೆ ಅನುವಾದ ಮತ್ತು ವ್ಯಾಖ್ಯಾನ ಮಂಡಗದ್ದೆ ಶ್ರೀನಿವಾಸಯ್ಯ ಶ್ಲೋಕ ೨೨ (ಕೆಲವು ವಿವರಣೆಗಳು) ಪೂರ್ವ ವಸ್ತ್ರಗಳನ್ನು ತ್ಯಜಿಸಿ ಮನುಜನು ತೊಡಲಿಹನು ನವ ವಸ್ತ್ರಗಳನ್ನು, ಅಂತೆಯೆ ಜೀವಾತ್ಮನ್ ತನ್ನ ಪೂರ್ವ ಶರೀರವನ್ನು ತ್ಯಜಿಸಿ ಕಳಚಿ ಪಡೆವನು ನವ ಶರೀರವನ್ನು. ಆತ್ಮನ ಸ್ವರೂಪ ಮತ್ತು ನಿಗೂಢತೆಯ ಬಗ್ಗೆ ಹಿರಿಯರು ಮತ್ತು ಓದುಗರು ತಮ್ಮ ಸಂದೇಹಗಳನ್ನು ಮುಂದಿಟ್ಟಿದ್ದರು. ಮಾತ್ರವಲ್ಲ, ಹಲವು ಸಲಹೆಗಳು ಸಹ ಬಂದಿವೆ. ಅವುಗಳ ಬಗ್ಗೆ ಕೆಳಗಿನ ನಾಲ್ಕು ಮಾತುಗಳು ತಮ್ಮ ಮುಂದೆ. ಶ್ಲೋಕ ೨೨ ಕ್ಕೂ ಇದು ಅನ್ವಯಿಸುವುದು. ಭಗವದ್ಗೀತೆಯ ಎರಡನೇ ಅಧ್ಯಾಯ, ಸಾಂಖ್ಯ ಯೋಗದಲ್ಲಿ ಬರುವ ಶ್ಲೋಕಗಳು ‘ಆತ್ಮ’ ನ ಸುತ್ತಲೇ ಓಡಾಡುವುದನ್ನು ನೋಡಿದ್ದೇವೆ. ಗೀತೆಯ ಈ ಶ್ಲೋಕಗಳಲ್ಲಿ ಕೆಲವು ಕಡೆ ವೈಜ್ಞಾನಿಕ ಹಿನ್ನೆಲೆಯನ್ನು ಸ್ಥೂಲವಾಗಿ ಚರ್ಚಿಸಿರುವುದೂ ಇದೆ. ಇದು ಹೀಗೇ ಎಂದು ಹೇಳಲು ಬರುವುದಿಲ್ಲ. ಜಗತ್ತಿನಾದ್ಯಂತ ವಿದ್ವಾಂಸರು ಅವರವರ ಸಿದ್ಧಾಂತ ಮತ್ತು ಭಾವಕ್ಕೆ ತಕ್ಕ ಹಾಗೆ ಗೀತೆಯ ಆಶಯಗಳಿಗೆ ತಾತ್ಪರ್ಯವನ್ನು ಕೊಟ್ಟಿದ್ದಾರೆ. ಅದೂ ಕೂಡಾ ಸರಿಯೇ. ಈ ಮಧ್ಯೆ ಹಿರೀಕರು ಮತ್ತು ಕೆಲವರು ಕೆಲವು ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮಾರ್ಗದರ್ಶನ ಮಾಡಿದ್ದಾರೆ. ಆತ್ಮವು ಒಂದು ಶರೀರವನ್ನು ತ್ಯಜಿಸಿ ಮತ್ತೊಂದು ಶರೀರವನ್ನು ಸೇರುವುದು ಎಂದರೆ ಪುನರ್ಜನ್ಮದ ಕಲ್ಪನೆಯೇ ಆಗಿದೆ. ಆಗ ಶರೀರದ ಮೂಲಭೂತ ಅಂಶ, ಆತ್ಮ ಎನ್ನುವ ಜೀವಕೋಶ (ಸೆಲ್) ನ್ಯ

ತಿಳಿಗನ್ನಡ ಭಗವದ್ಗೀತೆ - ಜುಲೈ 18, 2024

ಸಾಂಖ್ಯಯೋಗ, ಅಧ್ಯಾಯ ೨ ಶ್ಲೋಕ ೨೨(೩)(ಮುಂದುವರೆದ ಭಾಗ) ಪೂರ್ವ ವಸ್ತುಗಳನ್ನು ತ್ಯಜಿಸಿ ಹೊಸ ವಸ್ತುಗಳನ್ನು ತೊಡಲಿವೆ, ಅಂತೆಯೆ ಜೀವಾತ್ಮನು ತನ್ನ ಪೂರ್ವ ಶರೀರವನ್ನು ತ್ಯಜಿಸಿ ಹೊಸ ಶರೀರವನ್ನು ಪಡೆಯುತ್ತದೆ. ಇದು ಧರ್ಮ ಯುದ್ಧ. ಯುದ್ಧ ಸಮಯದಲ್ಲಿ ಆಗುವ ನಷ್ಟಗಳನ್ನು ಲೆಕ್ಕಿಸದೇ ಯುದ್ಧವನ್ನು ಮಾಡು. ವೃದ್ಧಾಪ್ಯದಲ್ಲಿರುವ ದ್ರೋಣ, ಪಿತಾಮಹ ಭೀಷ್ಮ, ಕೃಪ ಇರುತ್ತಾರೆ, ದಾಯವಾದಿ ಕೌರವ ಪಡೆ ಇರುತ್ತದೆ, ಬಂಧುಬಾಂಧವರು, ಸ್ನೇಹಿತರು ತರುಣರು ಇರಬಹುದು. ಅವರೆಲ್ಲರೂ ತ್ಯಾಗದ ಮೂಲಕ ಯುದ್ಧದಲ್ಲಿ ಮಡಿದರೆ ತಮ್ಮ ಶರೀರವನ್ನು ತ್ಯಜಿಸಿ ಹೊಸ ಶರೀರವನ್ನು ಪಡೆಯುತ್ತಾರೆ. ತ್ಯಾಗ ಎಂದರೆ ಯುದ್ಧದಲ್ಲಿ ಕರ್ತವ್ಯದೃಷ್ಟಿಯಿಂದ ವೀರಾವೇಶದಿಂದ ಕಾದಾಡಿದರಿಂದ ಅವರಿಗೆ ಸ್ವರ್ಗಸುಖ ಸಿಗುತ್ತದೆ, ಇಲ್ಲವೇ ಅವರು ಪುರಸ್ಕಾರಭಾಜನರಾಗುತ್ತಾರೆ ಎಂಬ ಸಂದೇಶ ಇಲ್ಲಿದೆ. ಹಳೇ ಉಡುಪನ್ನು ಕಳಚಿ ಹೊಸ ಬಟ್ಟೆಯನ್ನು ತೊಟ್ಟಾಗ ಆಗುವ ಆನಂದದಂತೆ ಅವರೆಲ್ಲರೂ ಹಳೇ ಶರೀರವನ್ನು ತ್ಯಜಿಸಿ ಹೊಸ ಶರೀರವನ್ನು ಪಡೆಯುವುದರಿಂದ ಆನಂದ ಎನ್ನುವ ಮೋಕ್ಷವನ್ನು ಪಡೆಯುತ್ತಾರೆ. ಟಿಪ್ಪಣಿ: ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ, ಹುಟ್ಟಿದವರು ಒಮ್ಮೆ ಸಾಯಲೇಬೇಕು, ಸಮುದ್ರದ ಅಲೆಗಳಿಂದ ಜನಿತ ನೀರಿನ ಗುಳ್ಳೆಗಳು ಕ್ಷಣ ಮಾತ್ರದಲ್ಲಿ ಸಾಯುತ್ತವೆ. ಮತ್ತೊಮ್ಮೆ ಅಲೆಗಳು ಬಂದಾಗ ಅದಕ್ಕೆ ಜೀವ ಬರುವುದು. ಮನುಷ್ಯನ ಬದುಕಿನಲ್ಲೂ ಈ ಕ್ರಮ ನಿರಂತರ. ಯಾರೂ ಗೂಟಕ್ಕೆ ಕಟ್ಟಿಕೊಂಡು ಗಟ್ಟಿಯಾಗಿ ಕೂರುವು